Main
ಯೋಗಿಯ ಆತ್ಮಕಥೆ
ಯೋಗಿಯ ಆತ್ಮಕಥೆ
ಪರಮಹಂಸ ಯೋಗಾನಂದ
4.0
/
5.0
0 comments
“ಯೋಗಿಯ ಆತ್ಮಕಥೆ” ನಮ್ಮ ಕಾಲದ ಮಹಾನ್ ವ್ಯಕ್ತಿಯ ಜೀವನವನ್ನು ನಿರೂಪಿಸುವ ಹಾಗೂ ಪ್ರಾಚೀನ ಯೋಗ ವಿಜ್ಞಾನ ಮತ್ತು ಕಾಲಮಾನಿತ ಧ್ಯಾನ ಪರಂಪರೆಯ ಒಂದು ಆಳವಾದ ಪರಿಚಯವನ್ನು ನಿರೂಪಿಸುವ ಒಂದು ಸುಂದರ ಕಥನ. ಎಲ್ಲರ ಮೆಚ್ಚುಗೆಗೆ ಪಾತ್ರವಾದ ಈ ಆತ್ಮಕಥೆ ನಮ್ಮ ಕಾಲದ ಮಹಾನ್ ಆಧ್ಯಾತ್ಮಿಕ ವ್ಯಕ್ತಿಯೊಬ್ಬರ ಆಕರ್ಷಕ ಚಿತ್ರಣವನ್ನು ಪ್ರಸ್ತುತ ಪಡಿಸುತ್ತದೆ. ಮನಸೆಳೆವ ಸರಳತೆ, ವಾಕ್ಚಾತುರ್ಯ ಮತ್ತು ವಿನೋದಪ್ರಜ್ಞೆಯಿಂದ, ಶ್ರೀ ಶ್ರೀ ಪರಮಹಂಸ ಯೋಗಾನಂದರು ತಮ್ಮ ಸ್ಫೂರ್ತಿದಾಯಕ ಜೀವನ ಚಿತ್ರಣವನ್ನು ನೀಡುತ್ತಾರೆ: ತಮ್ಮ ಬಾಲ್ಯದ ಅಸಾಮಾನ್ಯ ಅನುಭವಗಳು, ತಮ್ಮ ಯೌವನದಲ್ಲಿ ಭಾರತದಾದ್ಯಂತ ಜ್ಞಾನದಿಂದ ಬೆಳಗುವ ಸದ್ಗುರುವಿನ ಶೋಧನೆಯಲ್ಲಿ ತೊಡಗಿರುವಾಗ ಅನೇಕ ಸಂತರು ಮತ್ತು ಋಷಿಗಳನ್ನು ಸಂಧಿಸಿದುದು, ಹತ್ತು ವರ್ಷಗಳ ಕಾಲ ಒಬ್ಬ ಪೂಜಾರ್ಹ ಯೋಗ ಸದ್ಗುರುವಿನ ಆಶ್ರಮದಲ್ಲಿ ತರಬೇತಿ ಪಡೆದುದು, ಮೂವತ್ತು ವರ್ಷಗಳ ಕಾಲ ಅಮೆರಿಕದಲ್ಲಿ ಜೀವನ ನಡೆಸಿ ಬೋಧಿಸಿದುದು. ಅಷ್ಟೇ ಅಲ್ಲದೆ ಅವರು ಮಹಾತ್ಮ ಗಾಂಧಿ, ರವೀಂದ್ರನಾಥ ಠಾಕೂರರು, ಲೂದರ್ ಬರ್ಬ್ಯಾಂಕ್, ಶಿಲುಬೆ ಗಾಯದ ಕಲೆಗಳುಳ್ಳ ಕೆಥೋಲಿಕ್ ಸಂತಳಾದ ಥೆರೀಸಾ ನಾಯ್ಮನ್ ಮತ್ತು ಪೂರ್ವ ಹಾಗೂ ಪಶ್ಚಿಮದ ಇನ್ನೂ ಇತರ ಪ್ರಖ್ಯಾತ ಆಧ್ಯಾತ್ಮ ವ್ಯಕ್ತಿಗಳನ್ನು ಸಂಧಿಸಿದುದು ಇವೆಲ್ಲವನ್ನೂ ಇಲ್ಲಿ ದಾಖಲಿಸಲಾಗಿದೆ.ಲೇಖಕರು ದೈನಂದಿನ ಜೀವನದ ಸಾಮಾನ್ಯ ಘಟನೆಗಳು ಮತ್ತು ಪವಾಡಗಳೆಂದು ಕರೆಯಲ್ಪಡುವ ಅಸಾಮಾನ್ಯ ಘಟನೆಗಳು, ಇವೆರಡರ ಹಿಂದಿರುವ ಸೂಕ್ಷ್ಮ ಆದರೆ ನಿರ್ದಿಷ್ಟ ನಿಯಮಗಳನ್ನು ಸುಸ್ಪಷ್ಟವಾಗಿ ವಿವರಿಸಿದ್ದಾರೆ. ಮಾನವನ ಅಸ್ತಿತ್ವದ ಅಂತಿಮ ರಹಸ್ಯಗಳತ್ತ ಗಹನವಾದ ಮತ್ತು ಮರೆಯಲಾಗದ ದೃಷ್ಟಿ ಹಾಯಿಸಲು, ತಲ್ಲೀನಗೊಳಿಸುವ ಅವರ ಜೀವನದ ಕಥೆಯು ಅದರ ಹಿನ್ನೆಲೆಯಾಗಿ ಶೋಭಿಸುತ್ತದೆ. “ಇಪ್ಪತ್ತನೇ ಶತಮಾನದ ನೂರು ಅತ್ಯುತ್ತಮ ಆಧ್ಯಾತ್ಮಿಕ ಕೃತಿಗಳಲ್ಲೊಂದು” ಎಂದು ಆಯ್ಕೆಯಾಗಿರುವ “ಆಟೋಬಯಾಗ್ರಫಿ ಆಫ್ ಎ ಯೋಗಿ” (ಯೋಗಿಯ ಆತ್ಮಕಥೆ) ಯು ಐವತ್ತಕ್ಕೂ ಹೆಚ್ಚು ಭಾಷೆಗಳಲ್ಲಿ ಅನುವಾದಗೊಂಡಿದೆ ಮತ್ತು ಪ್ರಪಂಚದಾದ್ಯಂತ ಧಾರ್ಮಿಕ ಸಾಹಿತ್ಯದ ಮೇರುಕೃತಿ ಎಂದು ಪರಿಗಣಿಸಲ್ಪಟ್ಟಿದೆ. ಲಕ್ಷಗಟ್ಟಲೆ ಪುಸ್ತಕಗಳು ಮಾರಾಟವಾಗಿವೆ, ಮೊದಲ ಮುದ್ರಣವಾಗಿ ಎಪ್ಪತ್ತೈದು ವರ್ಷಗಳಾಗಿದ್ದರೂ, ಇದು ಹೆಚ್ಚು ಮಾರಾಟವಾಗುವ ಪುಸ್ತಕಗಳಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಅಸಾಧಾರಣವಾಗಿ ಸ್ಫೂರ್ತಿ ನೀಡುವ, ಅದೇ ಸಮಯಕ್ಕೆ ವಿಸ್ತೃತವಾಗಿ ಮನಸೂರೆಗೊಳ್ಳುವ, ವಿನೋದ ಪ್ರಜ್ಞೆಯಿಂದ ತುಂಬಿದ ಮತ್ತು ಗಣ್ಯ ಪುರುಷರ ವಿಷಯವನ್ನು ತಿಳಿಸುವ ಕೃತಿ ಇದಾಗಿದೆ. ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಪ್ರಕಟಣೆಗಳಲ್ಲದೆ ಬೇರೆ ಯಾವ ಪ್ರಕಟಣೆಗಳೂ, ಈ ಪುಸ್ತಕದ ಮೊದಲ ಅವತರಣಿಕೆಯ ಮುದ್ರಣದ ನಂತರ, ಲೇಖಕರ ಜೀವನದ ಅಂತಿಮ ವರ್ಷಗಳ ಬಗ್ಗೆ ಅವರು ಬರೆದಿರುವ ಕಡೆಯ ಅಧ್ಯಾಯವೂ ಸೇರಿದಂತೆ, ಅವರು ಸೇರಿಸಿದ ವ್ಯಾಪಕ ವಿಷಯಗಳನ್ನು ಹೊಂದಿರುವುದಿಲ್ಲ.
Comments of this book
There are no comments yet.